|
ನಮ್ಮ ಬೆಂಗಳೂರು ಪುರಸ್ಕಾರಗಳು, ಅತ್ಯಮೂಲ್ಯ ಕೊಡುಗೆ ನೀಡಿದ ಸಾಮಾನ್ಯ ನಾಗರಿಕರನ್ನು ಸುಪ್ರಸಿದ್ಧರಾಗಿಸಲಿದೆ
ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಮೆಟ್ರೋಪಾಲಿಟನ್ಗಳಲ್ಲಿ ಒಂದಾಗಿರುವ ಬೆಂಗಳೂರು, ಉದ್ಯಾನ ನಗರಿ, ಪಬ್ ನಗರಿ ಹಾಗೂ ದೇಶದ ಸಿಲಿಕಾನ್ ವ್ಯಾಲಿ ಎಂದೆಲ್ಲಾ ಖ್ಯಾತವಾಗಿದೆ. ಕೆಂಪೇಗೌಡರ ಬೆಂಗಳೂರು ಇಂದು, ಕೇವಲ ಮೇಲ್ಕಂಡ ಹೆಸರುಗಳಿಗಷ್ಟೇ ಅಲ್ಲ, ಅದರ ಇಂದಿನ ಸ್ಥಿತಿಗೆ ಕಾರಣರಾದ ಲಕ್ಷಾಂತರ ನಾಗರಿಕರಿಂದಲೂ ಹೆಸರುವಾಸಿಯಾಗಿದೆ.
ತಮ್ಮ ನೆರೆಹೊರೆ ಪ್ರದೇಶ ಹಾಗೂ ಸಮುದಾಯಕ್ಕೆ ಸೇವೆ ಸಲ್ಲಿಸುತ್ತಿರುವ ಆದರೂ ಎಲೆಮರೆಯ ಕಾಯಿಯಂತಿರುವ ಅನೆಕ ಜನರು ನಮ್ಮ ನಗರದಲ್ಲಿದ್ದಾರೆ. ನಮ್ಮ ನಗರದ ಈ 'ನೈಜ ತಾರೆಗಳಿಗೆ' ಧನ್ಯವಾದ ಅಪರ್ಿಸುವುದಕ್ಕಾಗಿ ನಮ್ಮ ಬೆಂಗಳೂರು ಪುರಸ್ಕಾರಗಳನ್ನು ಸ್ಥಾಪಿಸಲಾಗಿದೆ.
ಸಂಸತ್ ಸದಸ್ಯ ಹಾಗೂ ಅಬೈಡ್ನ ಸಂಚಾಲಕ ಶ್ರೀ ರಾಜೀವ್ ಚಂದ್ರಶೇಖರ್ ಅವರ ಒಂದು ಉಪಕ್ರಮವಾದ ನಮ್ಮ ಬೆಂಗಳೂರು ಪುರಸ್ಕಾರಗಳನ್ನು, ಸಾಮಾನ್ಯ ಜನರ ಮನದಲ್ಲಿ ಆಶಾಭಾವ ಹಾಗೂ ಆಸಕ್ತಿ ತುಂಬಲು ಹಾಗೂ ತಮ್ಮ ಅತ್ಯಮೂಲ್ಯ ಸೇವೆಗಾಗಿ ಸಾಮಾನ್ಯ ನಾಗರಿಕರನ್ನು ಸುಪ್ರಸಿದ್ಧರಾಗಿಸಲು, ಬೆಂಗಳೂರಿನ ಅಭಿವೃದ್ಧಿಗೆ ಶ್ರಮಿಸಿದ ವೈಯಕ್ತಿಕ ಆದರ್ಶಪ್ರಾಯ ಸಾಧನೆಯನ್ನು ಗುರುತಿಸಲು, ಸಾಮಾನ್ಯ ಪ್ರಜೆಯ ಜೀವನ ಮಟ್ಟವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದವರಿಗಾಗಿ, ಸಾಮಾನ್ಯ ನಾಗರಿಕರಿಗೆ ತಮ್ಮ ವಿನೂತನ ಕೊಡುಗೆಗಾಗಿ ಹಾಗೂ ಇತರರು ತಮ್ಮನ್ನು ಅನುಸರಿಸುವಂತೆ ನಿದರ್ಶನ ಸ್ಥಾಪಿಸುವ ರಾಯಭಾರಿಗಳನ್ನು ಹುಟ್ಟುಹಾಕುವ ಉದ್ದೇಶದೊಂದಿಗೆ ಆರಂಭಿಸಲಾಗಿದೆ.
ನಮ್ಮ ಬೆಂಗಳೂರು ಪುರಸ್ಕಾರಗಳು, ನಮ್ಮ ಬೆಂಗಳೂರು ಪ್ರತಿಷ್ಠಾನ, ಪ್ರತಿ ವರ್ಷ ಕೊಡಮಾಡುವ ವಾಷರ್ಿಕ ಪುರಸ್ಕಾರಗಳಾಗಿವೆ. ಪ್ರತಿಷ್ಠಾನ ಒಂದು ಲಾಭದಾಯಕವಲ್ಲದ ಸಂಸ್ಥೆಯಾಗಿದ್ದು ಆದಾಯ ತೆರಿಗೆಯ 80ಜಿ ಸೌಲಭ್ಯ ಒದಗಿಸುತ್ತದೆ.
ನಗರದ ಪೌರಾಡಳಿತ/ನಗರಾಡಳಿತ ಸಂಸ್ಥೆಗಳು ನಮ್ಮ ಬೆಂಗಳೂರು ಪುರಸ್ಕಾರಗಳನ್ನು ಪ್ರಾಯೋಜಿಸಲಿವೆ. ವೈಯಕ್ತಿಕ ಕಾಪರ್ೊರೆಟ್ಗಳು ಮುಂದೆಬಂದು ಈ ಪುರಸ್ಕಾರದ ಪ್ರಾಯೋಜಕತ್ವ ವಹಿಸಿಕೊಳ್ಳುವುದನ್ನು ನಾವು ಎದುರು ನೋಡುತ್ತೇವೆ/ನಿರೀಕ್ಷಿಸುತ್ತೇವೆ.
ಪುರಸ್ಕಾರದ ಮಾದ್ಯಮ ಪ್ರಾಯೋಜಕತ್ವ ವಹಿಸಲು ಸಂಪಕರ್ಿಸಿ:
sanjay@namma-bengaluru.in
trigam@namma-bengaluru.in
|