ನಮ್ಮ ಬೆಂಗಳೂರು ಪುರಸ್ಕಾರಗಳು, ಅತ್ಯಮೂಲ್ಯ ಕೊಡುಗೆ ನೀಡಿದ ಸಾಮಾನ್ಯ ನಾಗರಿಕರನ್ನು ಸುಪ್ರಸಿದ್ಧರಾಗಿಸಲಿದೆ

ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಮೆಟ್ರೋಪಾಲಿಟನ್ಗಳಲ್ಲಿ ಒಂದಾಗಿರುವ ಬೆಂಗಳೂರು, ಉದ್ಯಾನ ನಗರಿ, ಪಬ್ ನಗರಿ ಹಾಗೂ ದೇಶದ ಸಿಲಿಕಾನ್ ವ್ಯಾಲಿ ಎಂದೆಲ್ಲಾ ಖ್ಯಾತವಾಗಿದೆ. ಕೆಂಪೇಗೌಡರ ಬೆಂಗಳೂರು ಇಂದು, ಕೇವಲ ಮೇಲ್ಕಂಡ ಹೆಸರುಗಳಿಗಷ್ಟೇ ಅಲ್ಲ, ಅದರ ಇಂದಿನ ಸ್ಥಿತಿಗೆ ಕಾರಣರಾದ ಲಕ್ಷಾಂತರ ನಾಗರಿಕರಿಂದಲೂ ಹೆಸರುವಾಸಿಯಾಗಿದೆ.

ತಮ್ಮ ನೆರೆಹೊರೆ ಪ್ರದೇಶ ಹಾಗೂ ಸಮುದಾಯಕ್ಕೆ ಸೇವೆ ಸಲ್ಲಿಸುತ್ತಿರುವ ಆದರೂ ಎಲೆಮರೆಯ ಕಾಯಿಯಂತಿರುವ ಅನೆಕ ಜನರು ನಮ್ಮ ನಗರದಲ್ಲಿದ್ದಾರೆ. ನಮ್ಮ ನಗರದ ಈ 'ನೈಜ ತಾರೆಗಳಿಗೆ' ಧನ್ಯವಾದ ಅಪರ್ಿಸುವುದಕ್ಕಾಗಿ ನಮ್ಮ ಬೆಂಗಳೂರು ಪುರಸ್ಕಾರಗಳನ್ನು ಸ್ಥಾಪಿಸಲಾಗಿದೆ.

ಓದುವುದನ್ನು ಮುಂದುವರೆಸಲು
ನಮ್ಮ ಬೆಂಗಳೂರು ಪುರಸ್ಕಾರಗಳಿಗೆ ನಾಮಕರಣ ಪ್ರಕ್ರಿಯೆ ಮುಗಿದಿದೆ.
ವಿಧಾನ:

ನಮ್ಮ ನೆರೆಹೊರೆ/ಸಮುದಾಯದ ಅಭಿವೃದ್ಧಿಗೆ ನಿಸ್ವಾರ್ಥ ಕೊಡುಗೆ ನೀಡಿದ ಯಾವುದೇ ವ್ಯಕ್ತಿ/ಏಜೆನ್ಸಿ/ಪೌರ ಸಂಸ್ಥೆ ಸಿಬ್ಬಂದಿ/ಸಕರ್ಾರಿ ನೌಕರ/ಸರಕಾರೇತರ ಸಂಸ್ಥೆ, ನಿಮಗೆ ತಿಳಿದಿದ್ದಲ್ಲಿ ಕೂಡಲೇ ಅಜರ್ಿಯನ್ನು ಡೌನ್ಲೋಡ್ ಮಾಡಿ ಹಾಗೂ ಅವರ ವಿವರಗಳನ್ನು ಸಾಕ್ಷ್ಯ/ಆದಾರ(ಉದಾ: ಬಾವಚಿತ್ರಗಳು/ವಿಡಿಯೋಗಳು)ಗಳೊಂದಿಗೆ ಸಲ್ಲಿಸಿ.

ಅಜರ್ಿಯನ್ನು ಡೌನ್ಲೋಡ್ ಮಾಡಿ: ಇಂಗ್ಲೀಷ್ | ಕನ್ನಡ

ಜೂರಿ ಮಂಡಳಿ
ವಿಭಾಗಗಳು
ಸಾರ್ವಜನಿಕ ಅಧಿಕಾರಿಗಳು ಹಾಗೂ ಏಜೆನ್ಸಿಗಳಿಗಾಗಿ ನಮ್ಮ ಬೆಂಗಳೂರು ಪುರಸ್ಕಾರಗಳು

ಸಾರ್ವಜನಿಕ ಅಧಿಕಾರಿಗಳು ಹಾಗೂ ಏಜೆನ್ಸಿಗಳನ್ನು ಗುರುತಿಸಲು(ಉದಾಹರಣೆಗೆ; ಎಂಎಲ್ಎಗಳು, ಎಂಎಲ್ಸಿಗಳು, ಅಧಿಕಾರಿಗಳು ಹಾಗೂ ಪೌರ ಸಂಸ್ಥೆಗಳಾದ ಬಿಡಿಎ, ಬೆಸ್ಕಾಂ, ಬಿಬಿಎಂಪಿ ಇತ್ಯಾದಿಗಳ ಸಿಬ್ಬಂದಿ)

ಪುರಸ್ಕಾರಗಳಿಗೆ ಮಾನದಂಡ:
  • ನಾಗರಿಕರಿಗೆ ಪ್ರಶಂಸನಾರ್ಹ ಸೇವೆ
  • ಸಾರ್ವಜನಿಕ ಕಾಯರ್ಾಲಯವನ್ನು ನಿರ್ವಹಿಸುವಲ್ಲಿನ ಸಾಮಥ್ರ್ಯ
  • ರಚನಾತ್ಮಕತೆ ಹಾಗೂ ವೈವಿದ್ಯತೆ
  • ಪರಿಪೂರ್ಣತೆ ಹಾಗೂ ಕೂಲಂಕಷ ಕಾರ್ಯ
  • ತಪ್ಪುಗಳು ಹಾಗೂ ಆಕಸ್ಮಿಕಗಳನ್ನು ತಪ್ಪಿಸುವಲ್ಲಿ ಜಾಗರೂಕತೆ
  • ವಿವಿಧ ಏಜೆನ್ಸಿಗಳ ನಡುವಿನ ಸಹಕಾರ
  • ನಾಯಕತ್ವ
  • ಪರಂಪರೆಯ ರಕ್ಷಣೆ ಹಾಗೂ ಪೋಷಣೆ
  • ಪರಿಸರ ರಕ್ಷಣೆ ಹಾಗೂ ಸುಸ್ಥಿರತೆ
Sponsors: